Sunday, August 17, 2025

ಶಾತವಾಹನರ ಕುರಿತಾದ ನೋಟ್ಸ್‌

 

ಪರಿಚಯ

  • ಶಾತವಾಹನರು ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡೆಸಿದ ಮೊದಲ ರಾಜಮನೆತನವಾಗಿದೆ.

  • ಇವರು ಮೌರ್ಯರ ಸಾಮಂತ ದೊರೆಗಳಾಗಿದ್ದು, ಮೌರ್ಯರ ಅವನತಿಯ ನಂತರ ದಕ್ಷಿಣದಲ್ಲಿ ಸ್ವತಂತ್ರ ಆಳ್ವಿಕೆಯನ್ನು ಆರಂಭಿಸಿದರು.

  • ಶಾತವಾಹನರ ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಲಿಖಿತ ರೂಪದ ದಾಖಲೆಗಳು ಆರಂಭವಾದವು.

  • ಈ ರಾಜವಂಶವು ಸುಮಾರು 460 ವರ್ಷಗಳ ಕಾಲ 30 ಅರಸರಿಂದ ಆಳಲ್ಪಟ್ಟಿತು ಎಂದು ಮತ್ಸ್ಯ ಪುರಾಣ ಉಲ್ಲೇಖಿಸುತ್ತದೆ.

  • ಭಾಗವತ ಪುರಾಣದ ಪ್ರಕಾರ, 19 ಜನ ಅರಸರು 300 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದಾರೆ.

  • ಶಾತವಾಹನರ ಮೂಲವು ಆಂಧ್ರ ಪ್ರದೇಶಕ್ಕೆ ಸಂಬಂಧಿಸಿದೆ ಎಂದು ಅಶೋಕನ ಶಾಸನಗಳಲ್ಲಿ 'ಆಂಧ್ರಬೃತ್ಯರು' ಎಂದು ಉಲ್ಲೇಖಿಸಲಾಗಿದೆ.

  • ಆದರೆ, ಬಳ್ಳಾರಿ ಜಿಲ್ಲೆಯ ಹಿರೇಹಡಗಲಿ ಶಾಸನವು ಇವರು ಕರ್ನಾಟಕದವರು ಎಂದು ಉಲ್ಲೇಖಿಸುತ್ತದೆ.


ಪ್ರಮುಖ ಅರಸರು

  • ಸಿಮುಖ (ಕ್ರಿ.ಪೂ 235-212): ಈತ ಶಾತವಾಹನರ ಸ್ಥಾಪಕ. ಇವನ ರಾಜಧಾನಿ ಪೈಠಾಣ. ನಾಸಿಕ್ ಶಾಸನವು ಈತನನ್ನು 'ಕಣ್ವರ ದರ್ಪ ಮುರಿದವ' ಎಂದು ಮತ್ತು ನಾನಾಘಾಟ್ ಶಾಸನವು 'ರಾಯ ಸಿಮುಖ' ಎಂದು ಉಲ್ಲೇಖಿಸುತ್ತದೆ.

  • 1ನೇ ಶಾತಕರ್ಣಿ (ಕ್ರಿ.ಪೂ 194-148): ಶಾತವಾಹನರ ಆರಂಭಿಕ ದೊರೆ. ಇವನು ಬ್ರಾಹ್ಮಣ ಧರ್ಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ ಮತ್ತು ಅಶ್ವಮೇಧ ಯಾಗವನ್ನು ಕೈಗೊಂಡ. 'ದಕ್ಷಿಣಪಥಪತಿ' ಹಾಗೂ 'ಅಪ್ರತಿಸತ' ಎಂಬ ಬಿರುದುಗಳನ್ನು ಹೊಂದಿದ್ದ.

  • 2ನೇ ಶಾತಕರ್ಣಿ (ಕ್ರಿ.ಪೂ 50-25): ಈತ ಸಾಂಚಿಯ ಸ್ತೂಪಕ್ಕೆ ನಾಲ್ಕು ಅಲಂಕೃತ ದ್ವಾರಬಾಗಿಲುಗಳನ್ನು ನಿರ್ಮಿಸಿದ.

  • ಹಾಳ (ಕ್ರಿ.ಶ 20-24): 17ನೇ ಪ್ರಸಿದ್ಧ ಅರಸನಾದ ಇವನ ಬಿರುದು ಕವಿಪುಂಗವ. ಈತ ಪ್ರಾಕೃತ ಭಾಷೆಯಲ್ಲಿ

    ಗಾಥಾಸಪ್ತಶತಿ ಎಂಬ ಕೃತಿಯನ್ನು ರಚಿಸಿದ.

  • ಗೌತಮಿಪುತ್ರ ಶಾತಕರ್ಣಿ (ಕ್ರಿ.ಶ 106-130): ಈತ 23ನೇ ಪ್ರಸಿದ್ಧ ದೊರೆ. ನಾಸಿಕ್ ಶಾಸನವು ಈತನನ್ನು 'ಏಕಬಾರ ಸಮಣ' ಎಂದು ಉಲ್ಲೇಖಿಸುತ್ತದೆ. 'ತ್ರೈ ಸಮುದ್ರತೋಯಪೀತವಾಹನ' ಎಂಬ ಬಿರುದನ್ನು ಹೊಂದಿದ್ದ.

  • ವಸಿಷ್ಠಪುತ್ರ ಪುಳುಮಾಯಿ ಅಥವಾ 2ನೇ ಪುಳುಮಾಯಿ (ಕ್ರಿ.ಶ 130-159): ಈತ ಗೌತಮಿಪುತ್ರ ಶಾತಕರ್ಣಿಯ ಮಗ. ಇವನ ಬಿರುದುಗಳು 'ನವನಗರ ಸ್ವಾಮಿ' ಮತ್ತು 'ಆಂಧ್ರ ರಾಜ'.

  • ಯಜ್ಞಶ್ರೀ ಶಾತಕರ್ಣಿ (ಕ್ರಿ.ಶ 170-199): ಈತ ಶಾತವಾಹನರ ಕೊನೆಯ ಪ್ರಬಲ ದೊರೆ. ಇವನ ನಾಣ್ಯಗಳ ಮೇಲೆ ಹಡಗುಗಳ ಚಿತ್ರಗಳನ್ನು ಕಾಣಬಹುದು.


ಆಡಳಿತ ಮತ್ತು ಆರ್ಥಿಕತೆ

  • ಆಡಳಿತವು ವಂಶಪಾರಂಪರ್ಯವಾಗಿತ್ತು.

  • ಇವರ ಆಡಳಿತದಲ್ಲಿ

    ಆಹಾರ ಎಂಬ ಪ್ರಮುಖ ಪ್ರಾಂತೀಯ ವಿಭಾಗಗಳಿದ್ದವು, ಇದರ ಮುಖ್ಯಸ್ಥನನ್ನು ಅಮಾತ್ಯ ಅಥವಾ ರಾಜ್ಯಪಾಲ ಎನ್ನುತ್ತಿದ್ದರು.

  • ಭೂ ಕಂದಾಯ ಪ್ರಮುಖ ಆದಾಯದ ಮೂಲವಾಗಿದ್ದು, ಭೂ ಉತ್ಪತ್ತಿಯ 1/6 ಭಾಗವನ್ನು ತೆರಿಗೆಯಾಗಿ ಸಂಗ್ರಹಿಸಲಾಗುತ್ತಿತ್ತು.

  • ಪೈಠಾಣವು ಇವರ ಪ್ರಮುಖ ನೆಯ್ಗೆ ಕೇಂದ್ರವಾಗಿತ್ತು.

  • ರೋಮ್ ಮತ್ತು ಗ್ರೀಕ್ ಜೊತೆ ವ್ಯಾಪಾರ ಸಂಪರ್ಕ ಹೊಂದಿದ್ದರು.

  • ಅತಿ ಹೆಚ್ಚು ಕಾಳುಮೆಣಸನ್ನು ರಫ್ತು ಮಾಡುತ್ತಿದ್ದರು. ಸಂಸ್ಕೃತದಲ್ಲಿ ಇದನ್ನು 'ಯವನ ಪ್ರಿಯ' ಎಂದು ಕರೆಯಲಾಗುತ್ತಿತ್ತು.

  • ಪ್ರಮುಖ ಬಂದರುಗಳು ಭರೂಚ್ ಮತ್ತು ಅರಿಕಮೇಡು.


ಧಾರ್ಮಿಕ ಮತ್ತು ಸಾಮಾಜಿಕ ವ್ಯವಸ್ಥೆ

  • ಶಾತವಾಹನರು ಮೂಲತಃ ಬ್ರಾಹ್ಮಣ ಧರ್ಮದವರಾಗಿದ್ದು, ನಂತರ ಬೌದ್ಧ ಮತಾವಲಂಬಿಗಳಾದರು.

  • ಕರ್ನಾಟಕದಲ್ಲಿರುವ ತಾಳಗುಂದದ ಪ್ರಣವೇಶ್ವರ ದೇವಾಲಯವು ಶಾತವಾಹನರ ರಚನೆಯಾಗಿದ್ದು, ಇದು ಕರ್ನಾಟಕದಲ್ಲಿ ಸ್ಥಾಪನೆಗೊಂಡ ಮೊದಲ ಶೈವ ಮಂದಿರವಾಗಿದೆ.

  • ಮಹಿಳೆಯರ ಸ್ಥಾನಮಾನ ಉನ್ನತವಾಗಿದ್ದು, ಅವರು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದರು.


ಕಲೆ ಮತ್ತು ವಾಸ್ತುಶಿಲ್ಪ

  • ಚೈತ್ಯಾಲಯಗಳು, ವಿಹಾರಗಳು, ಮತ್ತು ಸ್ತೂಪಗಳು ಇವರ ಪ್ರಮುಖ ರಚನೆಗಳಾಗಿವೆ.

  • ಚೈತ್ಯಾಲಯಗಳು ಬೌದ್ಧರ ಪ್ರಾರ್ಥನಾ ಮಂದಿರಗಳು. ಇವರ ಪ್ರಮುಖ ಚೈತ್ಯಾಲಯಗಳಲ್ಲಿ ಮಹಾರಾಷ್ಟ್ರದ

    ಕಾರ್ಲೆ ಚೈತ್ಯಾಲಯ ದೊಡ್ಡದಾಗಿದೆ.

  • ವಿಹಾರಗಳು ಬೌದ್ಧ ಭಿಕ್ಷುಗಳು ವಾಸಿಸುವ ಸ್ಥಳಗಳಾಗಿವೆ.

  • ಸ್ತೂಪಗಳು ಆಂಧ್ರ ಪ್ರದೇಶದ ಅಮರಾವತಿ, ಘಂಟಿಸಾಲ, ಜಗ್ಗಯ್ಯಪೇಟ, ಮತ್ತು ನಾಗಾರ್ಜುನಕೊಂಡಗಳಲ್ಲಿ ಕಂಡುಬರುತ್ತವೆ.

  • ಅಜಂತಾ ಗುಹೆಯ 9ನೇ ಮತ್ತು 10ನೇ ಗುಹೆಗಳಲ್ಲಿ ಬುದ್ಧನ ವರ್ಣಚಿತ್ರಗಳು ಕಂಡುಬರುತ್ತವೆ. 

No comments:

Post a Comment

ಆಗಸ್ಟ್ ೨೬, ೨೦೨೫ ರ ಪ್ರಚಲಿತ ಘಟನೆಗಳು

  ಆಗಸ್ಟ್ ೨೬, ೨೦೨೫ ರ ಪ್ರಚಲಿತ ಘಟನೆಗಳು ೧. ಮೈಸೂರಿನ ಮಧುಸೂದನ್‌ಗೆ ಕೇಂದ್ರದ ಉತ್ತಮ ಶಿಕ್ಷಕ ಪ್ರಶಸ್ತಿ ವಿವರ: ಕೇಂದ್ರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ...