ಬನವಾಸಿ ಕದಂಬರು (ಕ್ರಿ.ಶ 345 - 519)
ಸ್ಥಾಪಕ: ಮಯೂರವರ್ಮ
. ರಾಜಧಾನಿ: ಬನವಾಸಿ (ಉತ್ತರ ಕನ್ನಡ ಜಿಲ್ಲೆ)
. ಲಾಂಛನ: ಸಿಂಹ
. ಧ್ವಜ: ವಾನರ ಧ್ವಜ
. ಆಡಳಿತ ಭಾಷೆ: ಕನ್ನಡ ಮತ್ತು ಸಂಸ್ಕೃತ
. ಇವರು ಕರ್ನಾಟಕದ ಮೊದಲ ರಾಜಮನೆತನವಾಗಿದೆ
. ಕದಂಬರ ಇತಿಹಾಸಕ್ಕೆ ಮೂಲಾಧಾರಗಳು: ಗುಡ್ನಾಪುರ ಶಾಸನ, ಚಂದ್ರವಳ್ಳಿ ಶಾಸನ, ಮಳವಳ್ಳಿ ಶಾಸನ, ತಾಳಗುಂದ ಶಾಸನ, ಮತ್ತು ಹಲ್ಮಡಿ ಶಾಸನ
.
ಪ್ರಮುಖ ಅರಸರು
ಮಯೂರವರ್ಮ (345-365): ಈತನ ಮೊದಲ ಹೆಸರು ಮಯೂರಶರ್ಮ
. ಈತ ಬ್ರಾಹ್ಮಣನಾಗಿದ್ದು, ವೇದಗಳನ್ನು ಓದಿ "ವೇದಾಂಗ ವಿದ್ಯಾವಿಶಾರದ" ಎಂಬ ಬಿರುದನ್ನು ಪಡೆದಿದ್ದನು . ಇವನು ಉನ್ನತ ವ್ಯಾಸಂಗಕ್ಕಾಗಿ ತನ್ನ ಅಜ್ಜನಾದ ವೀರಶರ್ಮನೊಂದಿಗೆ ಕಂಚಿ ಪ್ರದೇಶಕ್ಕೆ ತೆರಳಿದ್ದನು. ಕಂಚಿ ಆಗಿನ ಕಾಲದಲ್ಲಿ "ಘಟಿಕಾ ಸ್ಥಾನ" (ಉನ್ನತ ಶಿಕ್ಷಣ ಕೇಂದ್ರ) ಆಗಿತ್ತು . ಮಯೂರಶರ್ಮನು ಪಲ್ಲವರ ಅಶ್ವ ಸಂಸ್ಥೆಯಿಂದ ಅವಮಾನಗೊಂಡು ಬ್ರಾಹ್ಮಣತ್ವವನ್ನು ಬಿಟ್ಟು ಕ್ಷತ್ರಿಯ ಧರ್ಮವನ್ನು ಪಾಲಿಸಿ ಮಯೂರವರ್ಮ ಆದನು . ಪಲ್ಲವರ ಸಾಮಂತ ದೊರೆಗಳಾದ ಬೃಹತ ಬಾಣರನ್ನು ಸೋಲಿಸಿದನು . ಇವನು ಉತ್ತರ ಪ್ರದೇಶದ ಅಹಿಚ್ಚಿದ ಬ್ರಾಹ್ಮಣರನ್ನು ಕರೆತಂದು ತಾಳಗುಂದದಲ್ಲಿ 144 ಗ್ರಾಮಗಳನ್ನು ದಾನವಾಗಿ ನೀಡಿದನು . ಇವುಗಳನ್ನು "ಅಗ್ರಹಾರಗಳು" ಎಂದು ಕರೆಯಲಾಗುತ್ತಿತ್ತು . ಮಯೂರವರ್ಮನು ಬನವಾಸಿಯಲ್ಲಿ ಮಧುಕೇಶ್ವರ ದೇವಾಲಯವನ್ನು ನಿರ್ಮಿಸಿದನು . ಭಾಗೀರಥ ವರ್ಮ (390-415): ಈತನ ತಂದೆ ಕಂಗವರ್ಮ ಅಧಿಕಾರವನ್ನು ಕಳೆದುಕೊಂಡಾಗ ಈತನ ಜನನವಾಯಿತು. ಆದ್ದರಿಂದ ಈತನನ್ನು "ಕದಂಬಕುಲ ಪ್ರಚ್ಚನ್ನ ಜನ್ಮ" ಎಂದು ಕರೆಯಲಾಗುತ್ತದೆ
. ಕಾಕುತ್ಸವರ್ಮ (435-455): ಈತ ಮಯೂರವರ್ಮನ ನಂತರ ಅತಿ ಪ್ರಬಲವಾಗಿ ಆಳ್ವಿಕೆ ನಡೆಸಿದ ಕದಂಬ ದೊರೆ
. ಇವನನ್ನು "ಕದಂಬರ ಅನಘ್ರ್ಯ ರತ್ನ", "ಕದಂಬ ಕುಲಭೂಷಣ" ಮತ್ತು "ಕದಂಬರ ನೃಪತಿ" ಎಂದು ಉಲ್ಲೇಖಿಸಲಾಗಿದೆ . ಇವನ ವಿದೇಶಾಂಗ ನೀತಿಯು ತನ್ನ ಐದು ಜನ ಹೆಣ್ಣು ಮಕ್ಕಳನ್ನು ಐದು ಬೇರೆ ಬೇರೆ ರಾಜಮನೆತನಗಳಿಗೆ ಮದುವೆ ಮಾಡಿಕೊಡುವುದು . ತಾಳಗುಂದ ಶಾಸನವು ಇವನ ಸಾಧನೆಗಳ ಬಗ್ಗೆ ತಿಳಿಸುತ್ತದೆ . ಪ್ರಸಿದ್ಧ ಕವಿಯಾದ ಕಾಳಿದಾಸನು ಇವನ ಆಸ್ಥಾನಕ್ಕೆ ಭೇಟಿ ನೀಡಿದ್ದನು ಎಂದು ಹೇಳಲಾಗುತ್ತದೆ . ಶಾಂತಿ ವರ್ಮ (455-460): ಇವನ ಬಿರುದುಗಳು "ಧರ್ಮ ಮಹಾರಾಜ" ಮತ್ತು "ಸಮಗ್ರ ಕರ್ನಾಟಕ ದೇವ ಭೂಗಮ ಬತ್ತಾರ"
. ಮೃಗೇಶ ವರ್ಮ (460-480): ಇವನು ಹಲಸಿಯಲ್ಲಿ ಒಂದು ಜೈನ ಮಂದಿರವನ್ನು ನಿರ್ಮಿಸಿದನು
. ಇವನ ರಾಜಧಾನಿಗಳು ಬನವಾಸಿ ಮತ್ತು ಹಲಸಿ . ರವಿವರ್ಮ (480-519): ಈತ ಅತಿ ಹೆಚ್ಚು ಕಾಲ ಆಳ್ವಿಕೆ ನಡೆಸಿದ ಕದಂಬ ದೊರೆ
. ಇವನು ಜೈನ ಮತಾವಲಂಬಿಯಾಗಿದ್ದು, ಕಾರ್ತೀಕ ಮಾಸದಲ್ಲಿ "ಜೈನೇಂದ್ರ ಉತ್ಸವ"ವನ್ನು ಪ್ರಾರಂಭಿಸಿದನು . 2ನೇ ಕೃಷ್ಣ ವರ್ಮ: ಈತ ಕದಂಬ ಸಾಮ್ರಾಜ್ಯದ ಕೊನೆಯ ದೊರೆ
. ಇವನನ್ನು ಜಯಸಿಂಹನು ಸೋಲಿಸಿ ಬಾದಾಮಿ ಚಾಲುಕ್ಯರ ಆಡಳಿತವನ್ನು ಆರಂಭಿಸಿದನು .
ಆಡಳಿತ ವ್ಯವಸ್ಥೆ
ಆಡಳಿತವು ವಂಶಪಾರಂಪರ್ಯವಾಗಿತ್ತು
. ಮಂತ್ರಿಮಂಡಲದ ವ್ಯವಸ್ಥೆ:
ಪರುಪ್ರತಾರ: ಅರಮನೆಯ ಆದಾಯ ಮತ್ತು ವೆಚ್ಚವನ್ನು ನೋಡಿಕೊಳ್ಳುವ ಮಂತ್ರಿ
. ತಂತ್ರಪಾಲ: ವಿದೇಶಾಂಗ ಮಂತ್ರಿ
. ಕೋಶಾಧಿಕಾರ: ಹಣಕಾಸು ಮಂತ್ರಿ
. ತಾಂಬೂಲ ಪರುಪತಾರ: ಅರಮನೆಯ ಮೇಲ್ವಿಚಾರಕ
.
ಪ್ರಾಂತ್ಯಾಡಳಿತ: ಸಾಮ್ರಾಜ್ಯ (ರಾಜ) → ದೇವ/ಮಂಡಲ (ಪ್ರಾಂತ್ಯ) → ವಿಷಯ (ಜಿಲ್ಲೆ) → ದವಗ್ರಾಮ (ಗ್ರಾಮ)
.
ಆರ್ಥಿಕ ವ್ಯವಸ್ಥೆ
ಭೂಕಂದಾಯ ಪ್ರಮುಖವಾದ ಆದಾಯವಾಗಿತ್ತು. ಇದು 1/6 ಇತ್ತು
. ಭೂಕಂದಾಯ ಸಂಗ್ರಹಿಸುವ ಅಧಿಕಾರಗಳನ್ನು "ರಜ್ಜುಕರ" ಎಂದು ಕರೆಯುತ್ತಿದ್ದರು
. ಪಜ್ಞಮಾಂಕ: ವಿವಿಧ ವಸ್ತುಗಳ ಮೇಲೆ ಹಾಕುವ ತೆರಿಗೆ
. ಪನ್ನಾಯ: ಸಂತೆಯ ಮೇಲಿನ ತೆರಿಗೆ
. ಬಿಲ್ಕಡೆ: ಮಾರಾಟದ ಮೇಲಿನ ತೆರಿಗೆ
.
ಸಮಾಜ ಮತ್ತು ಧಾರ್ಮಿಕ ವ್ಯವಸ್ಥೆ
ಸಮಾಜದಲ್ಲಿ ಸ್ತ್ರೀಯರ ಸ್ಥಾನಮಾನಗಳು ಉನ್ನತವಾಗಿದ್ದವು. ಅವರು ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದರು
. ಕದಂಬರು ಮೂಲತಃ ವೈದಿಕ ಮತಸ್ಥರು, ನಂತರ ಜೈನ ಮತಾವಲಂಬಿಗಳಾದರು
. ಮೃಗೇಶ ವರ್ಮನ ಪತ್ನಿ ಪ್ರತಿಭಾದೇವಿಯು ಪ್ರಣವೇಶ್ವರ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದಳು
.
ಕಲೆ ಮತ್ತು ವಾಸ್ತುಶಿಲ್ಪ
ಕದಂಬರ ದೇವಾಲಯಗಳು ಹೆಚ್ಚಾಗಿ ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿವೆ
. ಕೆಲವು ದೇವಾಲಯಗಳು ವಿಮಾನ ಶೈಲಿ ಅಥವಾ ಕದಂಬ ಶೈಲಿಯಲ್ಲಿವೆ
. ವಾಸ್ತುಶಿಲ್ಪದ ಲಕ್ಷಣಗಳು:
ದೇವಾಲಯಗಳು ಚೌಕಾಕಾರದ ತಳಪಾಯವನ್ನು ಹೊಂದಿವೆ
. ದೇವಾಲಯಗಳು ಪಿರಮಿಡ್ ಆಕಾರದ ರಚನೆಯನ್ನು ಹೊಂದಿವೆ
.
ಉದಾಹರಣೆಗಳು:
ಹಲಸಿ: ಸತಿತಕೇಶ್ವರ, ಸುವರ್ಣೇಶ್ವರ, ಭುವರಾಸ, ರಾಮೇಶ್ವರ ದೇವಾಲಯಗಳು
. ಬನವಾಸಿ: ಮಧುಕೇಶ್ವರ ದೇವಾಲಯ
. ಹಾನಗಲ್: ತಾರಕೇಶ್ವರ ದೇವಾಲಯ
. ಬೈಲಹೊಂಗಲ: ಕಾದರೋಳಿ ದೇವಾಲಯ
. ಗೋವಾದ: ತಂಬಂಡಿಡಿ ಸುಲಮ ಮಸದೇವಿ ದೇವಾಲಯ
. ಕಾದರೋಳಿಯ ಶಂಕರ ದೇವಾಲಯವು ಶುದ್ಧ ಕದಂಬ ಅಥವಾ ವಿಮಾನ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿದೆ
.

No comments:
Post a Comment