ರಾಷ್ಟ್ರಕೂಟ ವಂಶ
ಮಾನ್ಯಪೇಟದ ರಾಷ್ಟ್ರಕೂಟರು (753 - 973)
- ಸ್ವಾಪಕ → ದಂತಿದುರ್ಗ
- ರಾಜಧಾನಿ → ಮಾನ್ಯಪೇಟ (ಮಳಪೇಡ), ಕಲ್ಯಾಣಿ ಜಿಲ್ಲೆ, ಕಾಗಿಣಿ ನದಿ ದಂಡೆ ಮೇಲಿದೆ.
- ಕಾಗಿಣಿ ನದಿ: ಭೀಮ ನದಿಯ ಉಪನದಿ, ಭೀಮ ನದಿಯ ಉಪನದಿಯು ಕೃಷ್ಣ.
- ಲಾಂಛನ → ಗರುಡ
NOTE:
- ಉತ್ತರ ಭಾರತದ ಗುಪ್ತ ಸಾಮ್ರಾಜ್ಯ ನಂತರ ಗರುಡವನ್ನು ಲಾಂಛನವಾಗಿ ಹೊಂದಿದ್ದವರು ರಾಷ್ಟ್ರಕೂಟರು.
- ದಂತಿದುರ್ಗನ → ಸುಮನಗಡ ಶಾಸನ
- ಒಂದನೇ ಕೃಷ್ಣನ ತಳ್ಳೀಗಾಂವ ಶಾಸನಗಳು (ಇವರ ಇತಿಹಾಸಕ್ಕೆ ಮೂಲಾಧಾರಗಳು)
- ಇವರು ಮಹಾರಾಷ್ಟ್ರದ ಎಲ್ಲೋರಪುರದಿಂದ ಆಳ್ವಿಕೆ ಪ್ರಾರಂಭಿಸಿದರು. ಇವರು ಮಹಾರಾಷ್ಟ್ರದ ಲಟ್ಟಲೂರಿನಿಂದ (ಲಾತೂರ್) ಉಸ್ಮಾನಾಬಾದ್ ಜಿಲ್ಲೆ ಬಂದಿದ್ದರಿಂದ "ಲಟ್ಟಲೂರಿನ ಪುರವಾಧೀಶ್ವರರು" ಎಂದು ಕರೆಯುವರು.
ರಾಷ್ಟ್ರಕೂಟ ಅರಸರ ಪಟ್ಟಿ
| ದಂತಿದುರ್ಗ | 735-756 |
| ಒಂದನೇ ಕೃಷ್ಣ | 756-774 |
| ಎರಡನೇ ಗೋವಿಂದ | 774-780 |
| ಧ್ರುವ (ಗೋವಿಂದ ಮೂರನೇ) | 780-793 |
| ಮೂರನೇ ಗೋವಿಂದ | 793-814 |
| ಒಂದನೇ ಅಮೋಘವರ್ಷ ನೃಪತುಂಗ | 814-878 |
| ಎರಡನೇ ಕೃಷ್ಣ | 878-914 |
| ಜಗತ್ತುಂಗ | 914-929 |
| ಮೂರನೇ ಇಂದ್ರ | 914-929 |
| ಮೂರನೇ ಕೃಷ್ಣ | 938-967 |
| ಖೋಟ್ಟಿಗ (ನಿರೂಪಮ) | 967-972 |
| ಎರಡನೇ ಕರ್ಕ | 972-973 |
ದಂತಿದುರ್ಗ (735-756)
- ರಾಷ್ಟ್ರಕೂಟರ ಸ್ಥಾಪಕ ದೊರೆ.
- ತಂದೆ → ಎರಡನೇ ಇಂದ್ರ
- ತಾಯಿ → ಭಾವನಾಗ (ಬಾದಾಮಿ ಚಾಲುಕ್ಯರ ವಂಶಸ್ಥೆ)
- ಇವಳನ್ನು ಅಪಹರಿಸಿಕೊಂಡು ಬಂದು ಮದುವೆಯಾದ.
- ಎರಡನೇ ಇಂದ್ರ ಬಾದಾಮಿ ಚಾಲುಕ್ಯರ ದೊರೆಯಾದ ಎರಡನೇ ವಿಕ್ರಮಾದಿತ್ಯನ ಸಾಮಂತ ದೊರೆಯಾಗಿ ಆಳ್ವಿಕೆ ಪ್ರಾರಂಭಿಸಿದ.
- ದಂತಿದುರ್ಗ ಮಾನ್ಯಪೇಟವನ್ನು ರಾಜಧಾನಿ ಮಾಡಿಕೊಂಡು ಆಳ್ವಿಕೆ ಪ್ರಾರಂಭಿಸಿದ.
- ಈತ ಎರಡನೇ ಕೀರ್ತಿವರ್ಮನನ್ನು ಸೋಲಿಸಿ ರಾಷ್ಟ್ರಕೂಟರ ಸಾಮ್ರಾಜ್ಯವನ್ನು ಸ್ಥಾಪಿಸಿದನು.
ಬಿರುದುಗಳು:
- ರಾಜ ಪರಮೇಶ್ವರ
- ಮಹಾಮಂಡಲೇಶ್ವರ
ಒಂದನೇ ಕೃಷ್ಣ (756-774)
- ಎರಡನೇ ಕೀರ್ತಿವರ್ಮನನ್ನು ಸಂಪೂರ್ಣವಾಗಿ ಸೋಲಿಸಿ ಇಡೀ ಬಾದಾಮಿಯನ್ನು ಮಾನ್ಯಪೇಟದಲ್ಲಿ ವಿಲೀನ ಮಾಡಿ ಅಧಿಕಾರ ನಡೆಸಿದ.
- ಈತ ಗಂಗರ ದೊರೆಯಾದ ಶ್ರೀ ಪುರುಷನನ್ನು ಸೋಲಿಸಿದನು.
- ಈತ ಎಲ್ಲೋರದಲ್ಲಿ ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದನು. ಇದು ಎಂಟನೇ ಶತಮಾನದ ಅದ್ಭುತ ರಚನೆ.
- ಇದು 16ನೇ ಗುಹೆಯಲ್ಲಿ ಕಂಡುಬರುತ್ತದೆ. ಇದನ್ನು ಪರ್ಸಿಬ್ರೌನ್ "ಭೂಲೋಕದ ಅದ್ಭುತ ರಚನೆ" ಎಂದಿದ್ದಾನೆ.
- ಈತ 15ನೇ ಗುಹೆ ಆದ ದಶಾವತಾರ ಗುಹೆಯನ್ನು ನಿರ್ಮಿಸಿದನು. ಇದು ಎಲ್ಲೋರದಲ್ಲಿ ಕಂಡುಬರುವ ಅತ್ಯಂತ ದೊಡ್ಡ ಗುಹೆ.
ಎರಡನೇ ಗೋವಿಂದ (774-780)
- ಧ್ರುವ (780-793)
- ಬಿರುದು → ಧಾರಾವರ್ಷ, ಕಲಿವಲ್ಲಭ, ನಿರೂಪಮ.
- ಧ್ರುವ ತನ್ನ ಸಹೋದರನಾದ ಎರಡನೇ ಗೋವಿಂದನನ್ನು ಸೋಲಿಸಿ ಆತನ ಸಹಾಯಕ್ಕೆ ಬಂದ ಗಂಗಾ ದೊರೆಯಾದ ಎರಡನೇ ಶಿವಮಾರನನ್ನು ಸೋಲಿಸಿದನು.
- ಉತ್ತರ ಭಾಗದಲ್ಲಿ ಕನೋಜ್ ಭಾಗವನ್ನು ಆಯುಧ ಮನೆತನದ ಇಂದ್ರಾಯದ ಆಳ್ವಿಕೆ ಮಾಡುತ್ತಿದ್ದನು.
- ಈತ ಅಪ್ರಬಲನಾಗಿದ್ದರಿಂದ ಕನೋಜದ ಭಾಗಕ್ಕಾಗಿ ಗುರ್ಜರ-ವತ್ಸರಾಜ ಮತ್ತು ಬಂಗಾಳದ ಧರ್ಮಪಾಲನ ಮಧ್ಯೆ ಯುದ್ಧ ಏರ್ಪಟ್ಟು ವತ್ಸರಾಜ ಭಾಗವನ್ನು ಗೆದ್ದು.
- ಧ್ರುವ ನೇರವಾಗಿ ಜಾನ್ಸಿ ಕದನದಲ್ಲಿ ವತ್ಸರಾಜನನ್ನು ಸೋಲಿಸಿ ಕನೋಜನ್ನು ಗೆದ್ದು.
- ಈತ ಬಂಗಾಳದ ಧರ್ಮ ಪಾಲನನ್ನು ಯಮುನಾ ನದಿಯ ದಂಡೆಯ ಮೇಲೆ ಸೋಲಿಸಿದನು.
- ಈತ ದ್ವಾರಸಮುದ್ರದಲ್ಲಿ (ಹಳೇಬೀಡು) ಒಂದು ಕೆರೆಯನ್ನು ಕಟ್ಟಿಸಿದ ಎಂದು ಉಲ್ಲೇಖಿಸಲಾಗುತ್ತದೆ.
ಮೂರನೇ ಗೋವಿಂದ (793-814)
- ಬಿರುದುಗಳು: ತ್ರಿಭುವನದವಳ, ಪ್ರಭುತವರ್ಷ, ಜೀನವಲ್ಲಭ
- ಈತ ಗುರ್ಜರ ಅರಸರಾದ ಎರಡನೇ ನಾಗಭಟ್ಟನನ್ನು ಸೋಲಿಸಿದ.
- "ಸಂಜಾನ್ ಶಾಸನದ ಪ್ರಕಾರ" → ಮೂರನೇ ಗೋವಿಂದನ ಕುದುರೆಗಳು ಹಿಮಾಲಯದ ತಪ್ಪಲಿನ ಗಂಗಾಜಲವನ್ನು ಕುಡಿದವೆಂದು ಉಲ್ಲೇಖಿಸಲಾಗುತ್ತದೆ.
ಒಂದನೇ ಅಮೋಘವರ್ಷ ನೃಪತುಂಗ (814-878)
- ಮೊದಲು ಹೆಸರು → ಶರ್ವ
- ತಂದೆ → ಮೂರನೇ ಗೋವಿಂದ
- ತಾಯಿ → ಗಾಮುಂಡಾಂಬ್ರ
- ಈತ ಜೈನ ಧರ್ಮವನ್ನು ಸ್ವೀಕರಿಸಿದ.
- ಈತ 14ನೇ ವರ್ಷಕ್ಕೆ ಅಧಿಕಾರಕ್ಕೆ ಬಂದ (ಭಾರತದಲ್ಲಿ 64 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಏಕೈಕ ದೊರೆ)
- ಈತನ ಸೇವಕ → ಬಂಕೇಶ. ಈತನ ನೆನಪಿಗಾಗಿ ಬಂಕಾಪುರ ನಗರವನ್ನು ನಿರ್ಮಿಸಿದ.
- ಆಸ್ವಾನದ ಕವಿ → ಶ್ರೀವಿಜಯ ಈತ "ಕವಿರಾಜಮಾರ್ಗ" ಗ್ರಂಥವನ್ನು ಬರೆದ.
NOTE: ಕವಿರಾಜಮಾರ್ಗ
- ಇದು ಕನ್ನಡದ ಮೊಟ್ಟಮೊದಲು ಉಪಲಬ್ಧ ಕೃತಿ.
- ಇದು ರಾಷ್ಟ್ರಕೂಟರ ಇತಿಹಾಸದ ಬಗ್ಗೆ ವಿವರಣೆ ನೀಡುತ್ತದೆ.
- ಇದು ಕರ್ನಾಟಕದ ಭೌಗೋಳಿಕ ಇತಿಹಾಸದ ಬಗ್ಗೆ ಉಲ್ಲೇಖಿಸುತ್ತದೆ.
- ಇದು ಕಾವೇರಿಯಿಂದ ಗೋದಾವರಿವರೆಗೆ ಇದ್ದ ನಾಡು ಕನ್ನಡ ನಾಡು ಎಂದು ಉಲ್ಲೇಖಿಸಿದೆ.
- ಇದು ಕಾವ್ಯದ ರಚನೆಯು ವ್ಯಾಕರಣದೋಷಗಳಿಂದ ಮುಕ್ತವಾಗಿ ಇರಬೇಕೆಂದು ಸೂಚಿಸಿದೆ.
- ಇದು ಮೊಟ್ಟಮೊದಲು ಬಾರಿಗೆ ಯತಿಯ ಬಗ್ಗೆ ಪ್ರಸ್ತಾಪಿಸಲ್ಪಟ್ಟಿದೆ. (ಯತಿ ಎಂದರೆ → ಪದ್ಯದ ನಿಯತವಾದ ಸ್ನಾನದಲ್ಲಿ ನಿಂತು ಹಾಡುವುದು)
- ವಿದ್ವಾಂಸನಾದ ಒಂದನೇ ನೃಪತುಂಗ "ಪ್ರಶ್ನೋತ್ತರ ರತ್ನಮಾಲ" ಗ್ರಂಥವನ್ನು ಬರೆದನು.
- ಬರಗಾಲ/ಕ್ಷಾಮ ಉಂಟಾದಾಗ ಕೊಲ್ಲಾಪುರದ ಮಹಾಲಕ್ಷ್ಮಿಗೆ ತನ್ನ ಎಡಗೈ ಹೆಬ್ಬೆರಳನ್ನು ಕತ್ತರಿಸಿ ಕೊಟ್ಟ ಇದರ ಉಲ್ಲೇಖ ಸಂಜಾನ್ ಶಾಸನದಲ್ಲಿ ಕಂಡುಬರುತ್ತದೆ.
- ಒಂದನೇ ನೃಪತುಂಗ ಕಾಗೆಮೊಗೂರು ಕದನದಲ್ಲಿ (816) ಗಂಗಾ ದೊರೆಯಾದ ಎರಡನೇ ಶಿವಮಾರನನ್ನು ಸೋಲಿಸಿದ.
- ಅಲ್ಲಿಕರವರ ಪ್ರಕಾರ → ಈತನನ್ನು "ಕರ್ನಾಟಕದ ಅಶೋಕ" ಎಂದು ಕರೆಯುವರು.
ಎರಡನೇ ಕೃಷ್ಣ (878-914)
- ಈತನ ಕಾಲದಲ್ಲಿ ರಾಷ್ಟ್ರಕೂಟರ ಸಾಮ್ರಾಜ್ಯವು ಕ್ಷೀಣಿಸತೊಡಗಿತು.
ಮೂರನೇ ಇಂದ್ರ (914-929)
- ಇನ್ನೊಂದು ರಾಜಧಾನಿ → ಮಯೂರಬಂಡಿ (ಬೀದರ್ ಜಿಲ್ಲೆ)
- 20 ಲಕ್ಷ ಬೆಳ್ಳಿಯ ನಾಣ್ಯಗಳನ್ನು ಧಾನ ಮಾಡಿ "ನಿತ್ಯವರ್ಷ" ಎಂಬ ಬಿರುದನ್ನು ಹೊಂದಿದ್ದ.
- 400 ಗ್ರಾಮಗಳನ್ನು ಬ್ರಾಹ್ಮಣರಿಗೆ ಧಾನ ಮಾಡಿದ.
- ಆಸ್ವಾನದಲ್ಲಿ ತ್ರಿವಿಕ್ರಮ ಎಂಬಾತ → "ನಳ ಚಂಪೂ" ಕೃತಿಯನ್ನು ಬರೆದ. ಇದು ಸಂಸ್ಕೃತದ ಮೊದಲ ಚಂಪು ಕೃತಿ.
- ಚಂಪು ಕೃತಿ ಎಂದರೆ → ಗದ್ಯ ಮತ್ತು ಪದ್ಯಗಳ ಮಿಶ್ರಿತ ಕಾವ್ಯ.
- ಬಿರುದು → ರಟ್ಟ ಕಂದರ್ಪ
ಮೂರನೇ ಕೃಷ್ಣ (938-967)
- ರಾಷ್ಟ್ರಕೂಟರ ಕೊನೆಯ ಪ್ರಬಲ ದೊರೆ.
- ಆಸ್ವಾನದ ಕವಿ → ಪೊನ್ನ, ಈತ "ಶಾಂತಿಪುರಾಣ" ಮತ್ತು "ಭುವನ್ಯಕ್ಕ ರಾಮಾಬುದ್ಧಯಂ" ಎಂಬ ಕೃತಿಯನ್ನು ಬರೆದನು.
- ಚೋಳರನ್ನು ಸೋಲಿಸಿ ಕಂಚಿಯವರೆಗೂ ಓಡಿಸಿಕೊಂಡು ಹೋದ ಈತ ರಾಮೇಶ್ವರದಲ್ಲಿ ವಿಜಯ ಸ್ತಂಭವನ್ನು ನಿರ್ಮಿಸಿದ ಮತ್ತು ಕೃಷ್ಣೇಶ್ವರ ದೇವಾಲಯವನ್ನು ನಿರ್ಮಿಸಿದ.
- ಈತನ ಕಾಲದಲ್ಲಿ ಪ್ರಸಿದ್ಧ ತಕ್ಕೊಳಗೂ (949ರಲ್ಲಿ) ಕದನ ನಡೆಯಿತು.
- ತಕ್ಕೊಳಗೂ ಕದನ → ಮೂರನೇ ಕೃಷ್ಣ (ರಾಷ್ಟ್ರಕೂಟರು ಗೆದ್ದರು) ಮತ್ತು ಒಂದನೇ ಪರಾಂತಕ ಚೋಳ (ಚೋಳರು ಸೋತರು).
- ಈಗ ಕದನದಲ್ಲಿ ಗಂಗದೇವ ಎರಡನೇ ಬೂತುಗ ಮೂರನೇ ಕೃಷ್ಣನಿಗೆ ಸೈನಿಕ ಸಹಾಯ ಮಾಡಿದನು. ಆದ್ದರಿಂದ ಮೂರನೇ ಕೃಷ್ಣ ಎರಡನೇ ಬೂತುಗನಿಗೆ ಬನವಾಸಿ 12000 ಪ್ರದೇಶವನ್ನು ಬಳಸಿಕೊಂಡು ಕೂಟ್ಯ.
ಖೋಟ್ಟಿಗ (967-972)
- ಈತನ ಕಾಲದಲ್ಲಿ ರಾಷ್ಟ್ರಕೂಟರ ಅವನತಿ ಪ್ರಾರಂಭಗೊಂಡಿತು.
ಎರಡನೇ ಕರ್ಕ (972-973)
- ಈತ ರಾಷ್ಟ್ರಕೂಟರ ಕೊನೆಯ ದೊರೆ.
- ಎರಡನೇ ಕರ್ಕವನ್ನು, ಎರಡನೇ ತೈಲಪ ಸೋಲಿಸುವುದರ ಮೂಲಕ ಕಲ್ಯಾಣ ಚಾಲುಕ್ಯರ ಮನೆತನವನ್ನು ಪ್ರಾರಂಭಿಸಿದ.
ಆಡಳಿತ ವ್ಯವಸ್ಥೆ
- ವಂಶ ಪಾರಂಪರ್ಯವಾಗಿತ್ತು → ತಂದೆಯಿಂದ ಮಗನಿಗೆ ಅಧಿಕಾರ ಹಸ್ತಾಂತರವಾಗುತ್ತಿತ್ತು.
- ರಾಷ್ಟ್ರಕೂಟರ ಮಂತ್ರಿ ಮಂಡಲ:
- ಅಮಾತ್ಯ → ಪ್ರಧಾನಮಂತ್ರಿ
- ಕರಣಿಕ → ಲೆಕ್ಕಪತ್ರಿಗ
- ಭಂಡಾರಿ → ಹಣಕಾಸು ಮಂತ್ರಿ
- ಮಹಾಸಂಧಿವಿಗ್ರಹ → ವಿದೇಶಾಂಗ ಮಂತ್ರಿ
- ಸೇನಾಧಿಪತಿ → ಸೇನೆಯ ಮುಖ್ಯಸ್ಥ
ಪ್ರಾಂತ್ಯ ಆಡಳಿತ
ಸಾಮ್ರಾಜ್ಯ ರಾಜ ↓ ರಾಷ್ಟ್ರ (ಪ್ರಾಂತ್ಯ) → ರಾಷ್ಟ್ರಪತಿ ↓ ವಿಷಯ (ಜಿಲ್ಲೆ) → ವಿಷಯಪತಿ ↓ ನಾಡು (ತಾಲೂಕು) → ನಾಡಗಾವುಂಡ ↓ ಗ್ರಾಮ → ಗ್ರಾಮಿಕ
- ರಾಷ್ಟ್ರಕೂಟರು ನಾಡುಗಳಿಗೆ ಮುಂಚೆ ಬುಕ್ತಿಗಳೆಂದು ಕರೆಯುತ್ತಿದ್ದರು. ಭಕ್ತಿಯ ಮುಖ್ಯಸ್ಥ → ಭೋಗಿಕ / ಭೋಗಿಪತಿ.
- ಇವರ ಕಾಲದಲ್ಲಿ ನಾಣ್ಯಗಳನ್ನು, ಟಂಕಿಸುವ ಶಾಲೆಗಳನ್ನು, ಅಕ್ಕಂ ಶಾಲೆಗಳೆಂದು ಕರೆಯುವರು.
ಸಾಮಾಜಿಕ/ಧಾರ್ಮಿಕ ವ್ಯವಸ್ಥೆ
- ಬ್ರಾಹ್ಮಣರ ಸ್ನಾನಮಾನಗಳು ಉನ್ನತವಾಗಿದ್ದವು.
- ಕ್ರಿಯರು ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದರು.
- ಇವರ ಕಾಲದ ಪ್ರಮುಖ ಶಿಕ್ಷಣ ಕೇಂದ್ರಗಳು:
- ಕಳೆನಿ (ಹಾವೇರಿ)
- ಸಾಲೋಟಗಿ (ವಿಜಯಪುರ)
- ಬಳ್ಳಿಗಾವೆ (ಶಿವಮೊಗ್ಗ)
ಆರ್ಥಿಕ ವ್ಯವಸ್ಥೆ
- ಭೂ ಕಂದಾಯ ¼ ಇತ್ತು.
- ರೋಮ್ ಮತ್ತು ಅರಬ್ಬರೊಂದಿಗೆ ವ್ಯಾಪಾರದ ಸಂಪರ್ಕವಿತ್ತು.
- ಅರಬ್ಬರು ರಾಷ್ಟ್ರಕೂಟರನ್ನು → "ಮಲಿಕ್ ಅಲ್ ಮುಲ್ಕ್" (ರಾಜರಿಗೆ ರಾಜರು) ಎಂದಿದ್ದಾರೆ.
ಸಾಹಿತ್ಯ
- ತ್ರೀವಿಜಯ
- ಕವಿರಾಜಮಾರ್ಗ ಗ್ರಂಥ
- ಶಿವಕೋಟಾಚಾರ್ಯ
- ವಡ್ಡಾರಾಧನೆ
- ತ್ರೀವಿಕ್ರಮ
- ನಳ ಚಂಪು
- ಪೊನ್ನ
- ಶಾಂತಿಪುರಾಣ, ಭುವನ್ಯಕ್ಕ ರಾಮಾಬುದ್ಧಯಂ
- ಹಲಾಯುಧ
- ಕವಿರಹಸ್ಯ
- ಗುಣಭದ್ರ
- ಉತ್ತರ ಪುರಾಣ
- ಜೀನಸೇನ
- ಪೂರ್ವಪುರಾಣ, ಹರಿವಂಶ
- ವೀರಸೇನ
- ಧವಳ
- ಮಹಾವೀರಚಾರ್ಯ
- ಗಣಿತ ಸಾರ ಸಂಗ್ರಹ
ಕಲೆ ಮತ್ತು ವಾಸ್ತುಶಿಲ್ಪ
- ರಾಷ್ಟ್ರಕೂಟರ ಬಹುತೇಕ ದೇವಾಲಯಗಳು ದ್ರಾವಿಡ ಶೈಲಿಯಲ್ಲಿವೆ.
- ಇವರು ಬಂಡೆಗಳನ್ನು ಕೊರೆದು ಮಾಡಿದ ಗುಹಾಂತರ ದೇವಾಲಯಗಳು ಇವರ ಅದ್ಭುತವಾದ ರಚನೆಗಳು.
1) ಎಲ್ಲೋರ್
- ರಾಜ್ಯ – ಮಹಾರಾಷ್ಟ್ರ
- ಇದು 1983 ರಲ್ಲಿ ಯುನೆಸ್ಕೋ ಪಟ್ಟಿಗೆ ಸೇರ್ಪಡೆ. ಇಲ್ಲಿ ಒಟ್ಟು 34 ಗುಹೆಗಳು ಕಂಡುಬರುತ್ತವೆ.
- ಪ್ರಾರಂಭದ 12 ಗುಹೆಗಳು ಬೌದ್ಧ ಧರ್ಮಕ್ಕೆ ಸಂಬಂಧಿಸಿದೆ. ಇವುಗಳನ್ನು ಮಧ್ಯಭಾರತದ ವಾಕಟಕರು ನಿರ್ಮಿಸಿದರು.
- ನಂತರದ 18 ಗುಹೆಗಳು ಹಿಂದೂ ಧರ್ಮಕ್ಕೆ ಸಂಬಂಧಿಸಿದೆ. ಇವುಗಳನ್ನು ರಾಷ್ಟ್ರಕೂಟರು ಮತ್ತು ಕಲಚೊರಿಗಳು ನಿರ್ಮಿಸಿದರು.
- ಕೊನೆಯ 4 ಗುಹೆಗಳು ಜೈನ ಧರ್ಮಕ್ಕೆ ಸಂಬಂಧಿಸಿದೆ. ಇವುಗಳನ್ನು ದೇವಗಿರಿಯ ಯಾದವರು ನಿರ್ಮಿಸಿದರು.
- ಇಲ್ಲಿ 10ನೇ ಗುಹೆ ವಿಶ್ವಕರ್ಮದ ಗುಹೆ.
- 15ನೇ ಗುಹೆ ದಶಾವತಾರ ಗುಹೆ.
- 16ನೇ ಗುಹೆ ಕೈಲಾಸನಾಥ ದೇವಾಲಯವಿರುವ ಗುಹೆ.
- 32ನೇ ಗುಹೆ ಇಂದ್ರ ಸಭಾ ಗುಹೆ.
2) ಅಜಂತಾ
- ಒಟ್ಟು 29 ಗುಹೆಗಳು. ಬೌದ್ಧ ಧರ್ಮಕ್ಕೆ ಸಂಬಂಧಿಸಿವೆ. ಇದು 1983 ರಲ್ಲಿ ಯುನೆಸ್ಕೋ ಪಟ್ಟಿಗೆ ಸೇರ್ಪಡೆಗೊಂಡಿತು.
3) ಎಲಿಫೆಂಟಾ
- ಇದರ ಮೊದಲು ಹೆಸರು: ಘೋಷಕಪುರಿ
- ಇದು 1987ರಲ್ಲಿ ಯುನೆಸ್ಕೋ ಪಟ್ಟಿಗೆ ಸೇರ್ಪಡೆಗೊಂಡಿತು.
- ಇದನ್ನು ಎಲಿಫೆಂಟಾ ಎಂದು ಕರೆದವರು ಪೋರ್ಚುಗೀಸರು.
- ಇಲ್ಲಿ ಏಳು ಗುಹೆಗಳು ಕಂಡುಬರುತ್ತವೆ. ಮಧ್ಯದಲ್ಲಿರುವ ಗುಹೆಯಲ್ಲಿ ತ್ರಿಮೂರ್ತಿ ವಿಗ್ರಹ (ಬ್ರಹ್ಮ, ವಿಷ್ಣು, ಮಹೇಶ್ವರ)
- ಮೂರ್ತಿ ಅಷ್ಟೇ 18 ಅಡಿ ಎತ್ತರವಿದೆ.
- ಎಳೆಯಿಂದ 20 ಅಡಿ ಎತ್ತರವಿದೆ.
No comments:
Post a Comment